Image placeholder

ಪೀಠಿಕೆ :-

ಶ್ರೀ ಮೈತ್ರಿ ಅಸೋಸಿಯೆಷನ್ (ರಿ) ಒಂದು ಸ್ವಯಂ ಸೇವಾ ಸಂಸ್ಥೆಯಾಗಿದ್ದು ಕೊಪ್ಪಳ ಜಿಲ್ಲೆಯ ಇರಕಲ್ಲಗಡಾ ಗ್ರಾಮದಲ್ಲಿ ವೃಧ್ಧಾಶ್ರಮವನ್ನು 2005-06 ರಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಭಾರತ ಸರ್ಕಾರದಡಿಯಲ್ಲಿ ಸ್ಥಾಪಿಸಲಾಗಿದೆ. ಸಮಾಜದಲ್ಲಿ ನೊಂದ ಮಕ್ಕಳಿಂದ ದೂರವಾದ ಮತ್ತು ನಿರ್ಲಕ್ಷಕ್ಕೆ ಒಳಗಾದ ವೃದ್ಧರಿಗೆ ಆಶ್ರಯ, ಆಸರೆ, ಮುತ್ತು ಸೇವೆಯನ್ನು ನೀಡುವುದರ ಜೊತೆಗೆ ಅವರಿಗೆ ಉತ್ತಮ ಕೌಟುಂಬಿಕ ವಾತಾವರಣವನ್ನು ಸೃಷ್ಟಿಸುವ ಕಾರ್ಯವನ್ನು ಮೈತ್ರಿ ವೃದ್ಧಾಶ್ರಮ ಮಾಡುತ್ತಾ ಬಂದಿದೆ. ಈವರೆಗೆ ಸುಮಾರು 350 ಹಿರಿಯ ನಾಗರಿಕರನ್ನು ದಾಖಲಿಸಿಕೊಂಡು ಎಲ್ಲಾ ರೀತಿಯ ನೆರವನ್ನು ನೀಡಿ ಖುಷಿಯಿಂದ ಆರೈಕೆ ಮಾಡಲಾಗಿದೆ.

Our Services

Image placeholder
Image placeholder
Image placeholder
Image placeholder
Image placeholder
Image placeholder

Our CCTV - Online



Software:- XMEye

User Name :- SriMaitri

Password: Admin123456

Serial No :- 05e5465793c838fd

XMEye APP User manual

Google Play Store

ವೃಧ್ಧಾಶ್ರಮದ ಪರಿಕಲ್ಪನೆ :-

ವೃದ್ಯಾಪ್ಯ ಮನುಷ್ಯನ ನಾಲ್ಕು ವಿಧದ ಅವಸ್ಥೆಗಳಲ್ಲಿ ಒಂದು. ಬಾಲ್ಯ, ಯವ್ವನ, ಗ್ರಹಸ್ಥ, ನಂತರ ಬರುವುದು ವೃದ್ಯಾಪ್ಯ. ಜೀವಿಯ ದೇಹವು ಬೆಳವಣಿಗೆಯ ಕೊನೆಯ ಹಂತದಲ್ಲಿರುವಾಗ ಬರುವ ಈ ವೃದ್ಯಾಪ್ಯ ಬದುಕಿನಲ್ಲಿ ಕೆಲವು ಕುಟುಂಬಗಳಲ್ಲಿ ದುಃಖದ ಛಾಯೆಯನ್ನು ನೀಡುವ ಬದುಕಿನ ಕೊನೆಯ ಗಳಿಗೆಯನ್ನು ತಂದೊಡ್ಡುತ್ತದೆ. ನಾವು ಇತಿಹಾಸದಲ್ಲಿ ಶ್ರವಣಕುಮಾರನ ಕಥೆಯನ್ನು ಕೇಳುತ್ತೇವೆ ಹಾಗೂ ಓದುತ್ತೇವೆ. ತನ್ನ ವೃದ್ಧ ತಂದೆ-ತಾಯಿಯನ್ನು ಬುಟ್ಟಿಯಲ್ಲಿ ಕುಳ್ಳರಿಸಿ ತೀರ್ಥಯಾತ್ರೆಯನ್ನು ಮಾಡಿಸಿದ್ದನು ಇದು ಮತ್ತೊಬ್ಬರಿಗೆ ಆದರ್ಶ ಪ್ರಾಯವೆಂಬ ಉದಾಹರಣೆ ಕೊಡುತ್ತದಲ್ಲವೇ? ಹಾಗಾದರೆ ಇಂದು ಅನೇಕರು ತಮ್ಮ ತಂದೆ-ತಾಯಿಯನ್ನು ಅದೆಷ್ಟು ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ಎಂಬುವುದನ್ನು ಉಹಿಸಿಕೊಂಡ್ರೆ ತುಂಬಾ ಬೇಸರವೆನಿಸುತ್ತದೆ.

ವಯೋವೃದ್ಧರು ತಮ್ಮ-ತಮ್ಮ ಮನೆಯಲ್ಲಿರಬಹುದು ಅಥವಾ ಹೊರಗಿರಬಹುದು. ಅವರನ್ನು ನೋಡಿಕೊಳ್ಳುವವರು ಒಂದಲ್ಲಾ ಒಂದು ರೀತಿಯಲ್ಲಿ ಅವರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಅವರ ಉಪಟಳಕ್ಕೆ ಒಳಗಾಗುತ್ತಿರುವುದನ್ನು ಮನಗಂಡು ಇಂತಹ ವೃದ್ಧರ ಸಹಾಯಕ್ಕಾಗಿ ಮಾನವೀಯತೆಯ ಹಣತೆಯಂತೆ ಕಾರ್ಯನಿರ್ವಹಿಸುವ ಕೇಂದ್ರವೇ "ವೃದ್ಧಾಶ್ರಮ" ಅಥವಾ ಡಂಪಿಂಗ್ ಯಾರ್ಡ್ ಅಥವಾ ಓಲ್ಡ್ ಏಜ್ ಹೋಮ್ ಮೊರೆ ಹೋಗುತ್ತಿರುವುದನ್ನು ಸೂಚಿಸುತ್ತದೆ. ಇದು ಇಂದಿನ ದಿನಗಳ ಕುಟುಂಬಗಳ ವ್ಯವಸ್ಥೆಯಲ್ಲಿ ಹೊಂದಾಣಿಕೆ ಕೊರತೆಯನ್ನು ಸೂಚಿಸುತ್ತದೆ.

Videos

Documents